ಚಿತ್ರ: ಸ್ವರ್ಣ ಗೌರಿ
ಸಾಹಿತ್ಯ: ಎಸ್.ಕೆ.ಕರೀಂಖಾನ್
ಗಾಯನ: ಪಿ.ಬಿ.ಶ್ರೀನಿವಾಸ್

ಬಾರೇ ನೀ ಚೆಲುವೆ!
ನಿನ್ನೊಲವು ನಲವು ಮಕರಂದ |೨|
ನಿನ್ನಂದ ಚಂದ ಮನಕಂದ
ಬಾರೀ ನೀ ಚೆಲುವೆ!

ನಾರಿ ಶೃಂಗಾರ ವಾಹಿನಿಯೆ |೨|
ಮಧುರ ಮಂದಾರ ಮೋಹಿನಿಯೆ
ಲಲಿತ ಸುಂದರ ರಮಣೀಯೆ!
ವಿಲಾಸವ ತೋರು, ವಿನೋದವ ಬೀರು
ವನರಾಣಿ, ಕಲವಾಣಿ, ಚಿಂತಾಮಣಿ
ಹೂಂ!
ಬಾರೇ ನೀ ಚೆಲುವೆ!

ಮೇಘ ಮಾಲೆಯೆ ಮುಂಗುರುಳು |೨|
ಕಮಲ ಸಮ್ಮೋಧ ಕಣ್ಣೆನಲು
ನಿನ್ನ ವಾಹನ ಗಿರಿಸಾಲು
ಸುಹಾಸಿನಿ ನೀರೆ ಸುಮೋದವ ತೋರೆ
ವನರಾಣಿ, ಕಲವಾಣಿ, ಚಿಂತಾಮಣಿ
ಹೂಂ!
ಬಾರೀ ನೀ ಚೆಲುವೆ!

ಮೌನವಿನ್ನೀಕೆ ಓ ರಮಣಿ? |೨|
ಮನವಸೋತೇನು ಲಾಲಿಸು ನೀ
ಓಲಿದು ಬಾರೆ ಸುಮವೇಣಿ |೨|
ಪರಾಗವ ಬೀರು ಸರಾಗವ ತೋರು
ವನರಾಣಿ, ಕಲವಾಣಿ, ಚಿಂತಾಮಣಿ
ಹೂಂ!

ಬಾರೇ ನೀ ಚೆಲುವೆ!|೨|
ನಿನ್ನೊಲವು ನಲವು ಮಕರಂದ |೨|
ನಿನ್ನಂದ ಚಂದ ಮನಕಂದ
ಬಾರೀ ನೀ ಚೆಲುವೆ!

Category: ಕನ್ನಡ ಚಿತ್ರಸಾಹಿತ್ಯ
Category: ಎಸ್.ಕೆ.ಕರೀಂಖಾನ್ ಸಾಹಿತ್ಯ
Category: ಸ್ವರ್ಣ ಗೌರಿ ಚಿತ್ರ
ವರ್ಗ: ಪಿ.ಬಿ.ಶ್ರೀನಿವಾಸ್ ಗಾಯನ